Pages

Friday, October 31, 2014

ನೆನಪಿನಲ್ಲಿ

ಹಾಗೇ ಗೀಚಿದ ಹಾಳೆಗಳು
ಎಷ್ಟೋ ವರುಷದ ಹಿ೦ದೆ
ಈಗ ಸಿಕ್ಕಿದೆ ನನಗೆ
ನೆನಪಾಗಿ

ಕಾಲದಾ ಮರೆಯಲ್ಲಿ
ಕಾಣದೇ ಹೋದದ್ದು
ಮರೆ ಸರಿಯೆ ಕಾಡುತಿದೆ
ಬಹಳವಾಗಿ

ನೋಡಿದರೆ ಹಾಳೆಗಳು ತು೦ಬ
ಮಸುಕಾಗಿಹುದು
ಅಸ್ಪಷ್ಟ ಅಕ್ಷರಗಳೆ ಎಲ್ಲ ಅಲ್ಲಿ
ಆದರೂ ನೆನಪಿನಾತೀವ್ರತೆಯಲಿ
ಹೊಸ ಹೊತ್ತಗೆ ಪರಿಮಳ
ಸೂಸುತಿಹುದು

No comments:

Post a Comment

LinkWithin