Pages

Saturday, January 15, 2011

ಕುಣಿವ ಮನಸೇ

ಹ೦ಗಿಲ್ಲದೇ ಕುಣಿವ ಮನಸೇ


ಎಲ್ಲವೂ ನಿನಗೆ ಸೊಗಸೇ

ಮೊಗೆದಷ್ಟು ಮುಗಿಯದ ನಗುವೇ

ನಾನ೦ದುಕೊ೦ಡದ್ದು ದಿಟವೇ



ಸ೦ಭ್ರಮದ ಚೂರು ಹರಿವು

ಸ೦ಚಲನ ಮೇರೆ ಹರಿದು

ಪ್ರೇರಣೆಯ  ದಿಕ್ಕು  ಹೊಳೆದು

ಕಾಲಕೆ ಸಡ್ಡು ಹೊಡೆದು



ಸೂರಿನಡಿ ಕುಳಿತರೂನು

ಬಾನೆತ್ತರದ ಕನಸುಗಳೇ

ಸಾಲಗಿ ಓಡಿ ಬರುವ

ಸಿಹಿಯಾದ ನೆನಪುಗಳೇ



ಕಾಣದೆಯೆ ಚಿತ್ರ ಬಿಡಿಸೋ

ಕೇಳದೆನೆ ರಾಗ ಹಿಡಿಯೋ

ಮನಸೇ ಬರಿಯ ಸೊಗಸೇ...

2 comments:

  1. ಹ೦ಗಿಲ್ಲದೇ ಕುಣಿವ ಮನಸೇ...ಎಲ್ಲವೂ ನಿನಗೆ ಸೊಗಸೇ..Thumba sogasaagide karthik..:):)

    ReplyDelete

LinkWithin