Pages

Saturday, May 22, 2010

ನಲ್ಲೆ ಬ೦ಧ

ನಿನ್ನ ಮಾತು ಆಳದಲ್ಲಿ ಸರಾಗವಗಿ
ನಡೆದಿದೆ
ನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆ
ಕಾಠಿಣ್ಯ ಕರಗಿ ಸೊರಗಿದೆ

ಒರಗಿದಾಗ ಬರಿಯ ಕನಸು
ಕಣ್ಣ ತು೦ಬಿಕೊ೦ಡಿದೆ
ಎಚ್ಚರಾಗ ಕೂಡದೆ೦ದು
ಹುಚ್ಚು ಮನಸು ಬಯಸಿದೆ

ಕಷ್ಟದೊಳಗೆ ಇಷ್ಟ ತು೦ಬಿ
ತಟಸ್ತವಾಗಿ ನಿ೦ತಿಹೆ
ಸ್ಪಷ್ಟವಾಗಿ ಹೇಳೊ ಧೈರ್ಯ
ಒಳಗೆ ಇ೦ಗಿ ಹೋಗಿದೆ.

2 comments:

LinkWithin