Pages

Saturday, August 28, 2010

ಉದ್ವೇಗ

ಕಣ್ಣು ಮಿಟುಕಿಸ ಬೇಡ

ಉತ್ತರಿಸು ಬೇಗ

ಕೋಪವೇತಕೆ ನಿನಗೆ

ನನ್ನಮೆಲೀಗ


ಭಾವಪರವಶವಾಗಿ

ಆಡಿದಾ ಮಾತು

ಕಾಡುವುದು ಅದೆಷ್ಟು

ನೋಡಿದೆಯ ಈಗ


ಮಾತು ಮಥಿಸುವ ಮೋದಲೆ

ಮೌನವದು ವ್ಯರ್ಥ

ಮಾತು ಮಥಿಸಿದ ಮೇಲೆ

ಮೌನಕೊ೦ದರ್ಥ

No comments:

Post a Comment

LinkWithin