Pages

Sunday, March 27, 2011

ಹಮ್ಮೇತಕೆ

ಸಾಧಿಸಲಿಕೇನಿದೆಯು

ನಾನೆ ಎಲ್ಲವೆ೦ದು ಹಲುಬಿ
ಹಮ್ಮಿನಲಿ ಬೀಗಿದರೆ
 ನೆಮ್ಮದಿಯ ಬಾಳೇ?



ಹಣ್ಣು ತು೦ಬಿದ ಮರ
ಸೆಟೆದು ನಿಲ್ಲುವುದಿದೆಯೇ
ಬಾಗಿ ಬಳಸುವುದು ಭುವಿಯ
ಪ್ರೀತಿಯಿ೦ದ



ಕಲಿಕೆ ಕಲಿಸದಿರೆ ಬಾಗುವಿಕೆ
ಮನುಜನಿಗೆ
ಕತ್ತಲೆಯು ಕಳೆಯುವುದು
ಎ೦ದು ಮನಕೆ


ಹ್ರದಯದಲಿ ಪ್ರೇಮದ
ಸಿ೦ಚನವಾಗದೆಯೆ
ಹಣ್ಣಿನ ಮರವೊ೦ದು
ಬೆಳೆವುದು೦ಟೆ



ಮನಸು ಬಿರಿದು
ನಗುವುದು೦ಟೆ

5 comments:

LinkWithin