Pages

Monday, December 23, 2013

ಸಖಿಯಾಗು ಬಾಳ ಉಷೆಯಾಗು

ದನಿಯಾಗು ನೀನನಗೆ
ಸಾ ಪ ಸ ದಿ ಜೊತೆಯಾಗು
ಮ೦ದ್ರ, ತೀವ್ರಗಳೆರಡು
ಹದವರೆತು ಮೇಳೈಸೆ

ಕನಸಾಗು ನೀನನಗೆ
ಭರವಸೆಯ ಜೊತೆಯಾಗು
ಉಕ್ಕುತಿಹ ಭಾವನೆಗಳ
ಭೊರ್ಗರೆತಕೆ ಸಮನಾಗಿ

ಉಷೆಯಾಗು ನೀನನಗೆ
ಬಸವಳಿಯದ ಹಾದಿಯಲಿ
ನಶೆಯಿಳಿದಮೇಲೂನು
ಆಸರೆಯ ಗೂಡಾಗು


ಮತಿಯಿರದೆ ಹೊದೇನು
 ಪ್ರೇಮದಮಲಿನಲಿ ಹಸಿಗೂಸು
ಸಖಿಯಾಗು ನೀನನಗೆ
ಬಾಳ ಜೊತೆಯಾಗು

No comments:

Post a Comment

LinkWithin