ಬನ್ನಿರಿ ಬನ್ನಿರಿ
ಪ್ರೀತಿಯ ತನ್ನಿರಿ
ಬರಡು ಹ್ರುದಯದಿ
ಬಿತ್ತಿರಿ
ಫಲ ದೊರೆಯುವುದನು
ನೆನೆಯುತ ನೆನೆಯುತ
ಹಿರಿ ಹಿರಿ ಹಿರಿ ಹಿರಿ
ಹಿಗ್ಗಿರಿ
ಬರಡಾದರು ನೆಲ
ವರ್ಷದ ಧಾರೆಗೆ
ಹಸಿರಿನ ಸೀರೆಯ
ಹೊದೆಯುವುದು
ಕಣ್ಣಿನ ಹನಿಯದು
ಮಣ್ಣಿಗೆ ಬಿದ್ದರೆ
ಜಿಗಿ ಜಿಗಿ
ಹೊಸಚಿಗುರೊಡೆಯುವುದು
ಪ್ರೀತಿಯ ಧಾರೆಗೆ
ಕಲ್ಲಿನ ಹ್ರುದಯವು
ಕರಗದೆ ಹಾಗೆ
ಉಳಿಯುವುದೆ
ಬಿಸಿಯುಸಿರಿನ
ಬಿಸಿಯಪ್ಪುಗೆಯೊಳಗಡೆ
ಕಾಠಿಣ್ಯವು ಬಡವಾಗುವುದು
ಪ್ರೀತಿಯ ತನ್ನಿರಿ
ಬರಡು ಹ್ರುದಯದಿ
ಬಿತ್ತಿರಿ
ಫಲ ದೊರೆಯುವುದನು
ನೆನೆಯುತ ನೆನೆಯುತ
ಹಿರಿ ಹಿರಿ ಹಿರಿ ಹಿರಿ
ಹಿಗ್ಗಿರಿ
ಬರಡಾದರು ನೆಲ
ವರ್ಷದ ಧಾರೆಗೆ
ಹಸಿರಿನ ಸೀರೆಯ
ಹೊದೆಯುವುದು
ಕಣ್ಣಿನ ಹನಿಯದು
ಮಣ್ಣಿಗೆ ಬಿದ್ದರೆ
ಜಿಗಿ ಜಿಗಿ
ಹೊಸಚಿಗುರೊಡೆಯುವುದು
ಪ್ರೀತಿಯ ಧಾರೆಗೆ
ಕಲ್ಲಿನ ಹ್ರುದಯವು
ಕರಗದೆ ಹಾಗೆ
ಉಳಿಯುವುದೆ
ಬಿಸಿಯುಸಿರಿನ
ಬಿಸಿಯಪ್ಪುಗೆಯೊಳಗಡೆ
ಕಾಠಿಣ್ಯವು ಬಡವಾಗುವುದು
No comments:
Post a Comment