Pages

Saturday, December 28, 2013

ಕಲಿಕೆ

ಅಬ್ಬ ಎನದು ಚಳಿಯು
ಲಿ೦ಬೆ ಹಣ್ಣದು ಹುಳಿಯು
ಡಿಗ್ರಿಗಳು ಬೇಕೆ ಇದನು
ತಿಳಿದುಕೊಳಲು?

ಹತ್ತು ಪಾಠವ ಉರುಹೊಡೆದು
ತೊ೦ಬತ್ತು ಪರ್ಸೆ೦ಟು
ಬುದ್ದಿವ೦ತನೆ ಇವನು
ಲೋಕದೊಳಗೆ?

ಮಗುವ ಹಸಿವನು ಅಮ್ಮ
ಅರಿಯುವಳು ಕ್ಷಣದಲ್ಲೆ
ಕಲಿತಿಹಳೆ ಮನಃಶಾಸ್ತ್ರ
ಕಾಲೇಜಲ್ಲಿ?

ಚ೦ದ ಸೂರನು ಕಟ್ಟಿ
ಮೊಟ್ಟೆ ಇಡುವುದು ಹಕ್ಕಿ
ಹೇಳಿಕೊಟ್ಟವರಾರದಕೆ
ಥಿಯರಿಯನ್ನು?



No comments:

Post a Comment

LinkWithin