ಬಯಸದೇ ಬಳಿ ಬ೦ದು
ಎನ್ನ ಬಿಗಿದಪ್ಪಿ ಒ೦ಟಿತನ ಕೇಳುತಿದೆ
ನಿನ್ನವರು ಯಾರು ನಿನ್ನವರು ಯಾರು
ಬಿಸಿಲಲ್ಲಿ ನೆರಳಿತ್ತು
ಹಸಿದವಗೆ ಹಣ್ಣಿತ್ತು
ಆಸರೆಯನಿತ್ತು
ಕೊಡಲಿ ಪೆಟ್ಟಿನ ವೇಳೆ
ನಿನ್ನವರು ಯಾರು
ತಲೆಯಿಡಲು ಹೆಗಲಿತ್ತು
ಕನಸಲ್ಲಿ ಪಾಲಿತ್ತು
ಸುಖವೆಲ್ಲ ನಿನಗಾಗಿ ಎ೦ಬ ವಚನವನಿತ್ತು
ಕಾಲದಲ್ಲಿ ತಿರುಗಿ ನಿನ್ನ ನೋಯಿಸೆ
ನಿನ್ನವರು ಯಾರು,,,
nice lines
ReplyDeletethank u manjunath:)
ReplyDelete