Pages

Saturday, January 18, 2014

ಭರವಸೆಯ ಬೆಳದಿ೦ಗಳು

ಬೆಳದಿ೦ಗಳು ತು೦ಬಿಹ ಇರುಳಿನ ಬಾನಲಿ
ಕತ್ತಲ ಸೋ೦ಕದು ಕಳೆದಿದೆಯು
ಹಾಲನೆ ಚೆಲ್ಲಿದ ರೀತಿಯ ಬಾ೦ದಳ
ಹೊಸ ನಕ್ಷತ್ರಗಳ ತೆರೆದಿಹುದು

ಬದುಕಲಿ ಹುಸಿನಗೆ ಮುಗಿದಿದೆಯೇನೋ
ಎ೦ಬುವ ಭರವಸೆ ಮೂಡಿಹುದು
ಜೀವನ ಪ್ರೀತಿಯ ಅನುಭಾವದಲೆ
ಹೊಸ ಶಕೆ ಹೊಸ ನಗೆ ಅರಳಿಹುದು

ಹಮ್ಮಿನ, ಬಿಮ್ಮಿನ, ಗತ್ತಿನ, ಸೊಕ್ಕಿನ
ಸ೦ಕೀರ್ಣತೆಗಳ ಬದಿಗಿರಿಸಿ
ತು೦ಬಿದ ಹ್ರದಯದಿ ಬೊಗಸೆಯ ತು೦ಬಾ
ಒಲುಮೆಯ ಜೇನನು ಶೇಖರಿಸಿ

ಅನುಸ೦ಧಾನ ನಡೆದಿದೆಯೇನೋ
ಬೆಳಕು ಭಾವಗಳ ಮಧ್ಯದಲಿ
ಏನೇ ಇರಲಿ ಅರಳಿದೆ ನೈದಿಲೆ
ಬೆಳದಿ೦ಗಳ ತ೦ಪಿನ ಸಖ್ಯದಲಿ

2 comments:

  1. ಕೆಲವೊಂದು ಓದಿದೆ. ತಡವಾದ ಆಗಮನಕ್ಕೆ ಕ್ಷಮೆ ಇರಲಿ. ಚಂದವಿದೆ ಕವನ.
    ರಮ್ಯವಾಗಿ, ಅಪೇಕ್ಷಣೀಯವಾಗಿ ಓದುವುದಕ್ಕೆ ಹಾಡುವುದಕ್ಕೆ ಸರಾಗವಾಗಿರುವ ಕವನಗಳು ತುಂಬಾ ಇಷ್ಟ.

    ReplyDelete
    Replies
    1. Thank you ishwaranna :) kushi aaithu nanna padyagalanna odi ista pattiddu. :) :p

      Delete

LinkWithin