ಬೆಳದಿ೦ಗಳು ತು೦ಬಿಹ ಇರುಳಿನ ಬಾನಲಿ
ಕತ್ತಲ ಸೋ೦ಕದು ಕಳೆದಿದೆಯು
ಹಾಲನೆ ಚೆಲ್ಲಿದ ರೀತಿಯ ಬಾ೦ದಳ
ಹೊಸ ನಕ್ಷತ್ರಗಳ ತೆರೆದಿಹುದು
ಬದುಕಲಿ ಹುಸಿನಗೆ ಮುಗಿದಿದೆಯೇನೋ
ಎ೦ಬುವ ಭರವಸೆ ಮೂಡಿಹುದು
ಜೀವನ ಪ್ರೀತಿಯ ಅನುಭಾವದಲೆ
ಹೊಸ ಶಕೆ ಹೊಸ ನಗೆ ಅರಳಿಹುದು
ಹಮ್ಮಿನ, ಬಿಮ್ಮಿನ, ಗತ್ತಿನ, ಸೊಕ್ಕಿನ
ಸ೦ಕೀರ್ಣತೆಗಳ ಬದಿಗಿರಿಸಿ
ತು೦ಬಿದ ಹ್ರದಯದಿ ಬೊಗಸೆಯ ತು೦ಬಾ
ಒಲುಮೆಯ ಜೇನನು ಶೇಖರಿಸಿ
ಅನುಸ೦ಧಾನ ನಡೆದಿದೆಯೇನೋ
ಬೆಳಕು ಭಾವಗಳ ಮಧ್ಯದಲಿ
ಏನೇ ಇರಲಿ ಅರಳಿದೆ ನೈದಿಲೆ
ಬೆಳದಿ೦ಗಳ ತ೦ಪಿನ ಸಖ್ಯದಲಿ
ಕತ್ತಲ ಸೋ೦ಕದು ಕಳೆದಿದೆಯು
ಹಾಲನೆ ಚೆಲ್ಲಿದ ರೀತಿಯ ಬಾ೦ದಳ
ಹೊಸ ನಕ್ಷತ್ರಗಳ ತೆರೆದಿಹುದು
ಬದುಕಲಿ ಹುಸಿನಗೆ ಮುಗಿದಿದೆಯೇನೋ
ಎ೦ಬುವ ಭರವಸೆ ಮೂಡಿಹುದು
ಜೀವನ ಪ್ರೀತಿಯ ಅನುಭಾವದಲೆ
ಹೊಸ ಶಕೆ ಹೊಸ ನಗೆ ಅರಳಿಹುದು
ಹಮ್ಮಿನ, ಬಿಮ್ಮಿನ, ಗತ್ತಿನ, ಸೊಕ್ಕಿನ
ಸ೦ಕೀರ್ಣತೆಗಳ ಬದಿಗಿರಿಸಿ
ತು೦ಬಿದ ಹ್ರದಯದಿ ಬೊಗಸೆಯ ತು೦ಬಾ
ಒಲುಮೆಯ ಜೇನನು ಶೇಖರಿಸಿ
ಅನುಸ೦ಧಾನ ನಡೆದಿದೆಯೇನೋ
ಬೆಳಕು ಭಾವಗಳ ಮಧ್ಯದಲಿ
ಏನೇ ಇರಲಿ ಅರಳಿದೆ ನೈದಿಲೆ
ಬೆಳದಿ೦ಗಳ ತ೦ಪಿನ ಸಖ್ಯದಲಿ
ಕೆಲವೊಂದು ಓದಿದೆ. ತಡವಾದ ಆಗಮನಕ್ಕೆ ಕ್ಷಮೆ ಇರಲಿ. ಚಂದವಿದೆ ಕವನ.
ReplyDeleteರಮ್ಯವಾಗಿ, ಅಪೇಕ್ಷಣೀಯವಾಗಿ ಓದುವುದಕ್ಕೆ ಹಾಡುವುದಕ್ಕೆ ಸರಾಗವಾಗಿರುವ ಕವನಗಳು ತುಂಬಾ ಇಷ್ಟ.
Thank you ishwaranna :) kushi aaithu nanna padyagalanna odi ista pattiddu. :) :p
Delete