Pages

Tuesday, August 30, 2011

ಹಾಡಲೆ ನಿನಗೆ

ಕನ್ನಡಿಯ ಒಳಗಿದೆ ಮನವು
ಕಾಣಿಸದೆ ಬಿ೦ಬವು ನಿನಗೆ
ಹಾಡದು ಬಲಿತಿದೆ ಒಳಗೆ
ಹಾಡಲೆ ನಿನಗೆ ಒಲವೇ

ಹೊಸದೊ೦ದು ಊರಿನ ಬಳಿಗೆ
ನಮದೊ೦ದು ಸೂರಿನ ಕೆಳಗೆ
ಸಾವರಿಸಿ ಕುಳಿತು ಜೊತೆಗೆ
ಪಿಸುಮಾತ ಸ೦ಭ್ರಮದಡುಗೆ

ತಣ್ಣನೆಯ ಗಾಳಿಯು ಸುಳಿಯೆ
ಸುತ್ತೆಲ್ಲ ಹಸಿರದು ಬೆಳೆಯೆ
ಎತ್ತರದ ಬೆಟ್ಟದ ಮೇಲೆ
ಹಾಡದು ನಿನಗೇ ಮುಗುದೆ

ಕಾತರದ ಅದಷ್ಟೋ  ಘಳಿಗೆ
ಈ ಹೊತ್ತ ಪೋಣಿಸುವೆ ಅದಕೆ

10 comments:

  1. good one bro...
    "ಸಾವರಿಸಿ ಕುಳಿತು ಜೊತೆಗೆ
    ಪಿಸುಮಾತ ಸ೦ಭ್ರಮದಡುಗೆ"
    much better line.... :) :)

    ReplyDelete
  2. ಚೆನ್ನಾಗಿದೆ ಬ್ಲಾಗು ಮತ್ತೆ ಹಾಡುಗಳು.. ರಮ್ಯದ ಕವನಗಳು ಸುಲಭ ಮತ್ತು ಮುದ ಕೊಡುತ್ತದೆ. ಮುಂದುವರೆಸಿ .

    ReplyDelete
  3. thanks ishwaranna,,, nimma salahe hagu prothsaha hige irali

    ReplyDelete
  4. ಕಾತರದ ಅದಷ್ಟೋ ಘಳಿಗೆ
    ಈ ಹೊತ್ತ ಪೋಣಿಸುವೆ ಅದಕೆ
    'ಅನುದಿನವೂ ನಿನ್ನದೇ ಸಾಮೀಪ್ಯದ ಬಯಕೆ
    ಅಲ್ಲಿವರೆಗೆ ನನಗಿರಲಿ ನಿನ್ನ ನೆನಪುಗಳ ಬೆಚ್ಚನೆ ಹೊದಿಕೆ'
    ಕೊನೆ ಸಾಲು ನನ್ನ ಸೇರ್ಪಡೆ.. ಉತ್ತಮವಾಗಿದೆ ಕವನ
    keep it up..!

    ReplyDelete
  5. ishwara super lines :) thank u...

    ReplyDelete
  6. Kavana chennagide. Tumba natural agi baredantide.Ishta aytu.

    ReplyDelete
  7. dhanyavada ravishankar :) blog odtha iri...

    ReplyDelete
  8. ಸಾಲುಗಳು ಸರಳ.... ಸುಂದರ .....ಹಾಗೂ ಲಯಬದ್ಧವಾಗಿವೆ.... last two lines r very beutiful and creative.... keep it up....

    ReplyDelete

LinkWithin