ಸಾಲುಗಳು ಮೂಡುತಿದೆ
ನಿನ್ನದೇ ನೆನಪಲ್ಲಿ
ಸಿಕ್ಕಿಹೆನು ಸುಳಿಯಲ್ಲಿ
ನಿನ್ನ ಸ್ನೇಹದ ಹೊಳೆಯಲ್ಲಿ
ಕಾದಿಹೆನು ಅಲೆಯೊ೦ದು
ಕೆನ್ನೆ ಸೊಕುವುದೇ ಎ೦ದು
ಮರದ ಮೇಲೆಯು ಕುಳಿತ
ಕೋಗಿಲೆಯ ಕೇಳಿದೆನು
ಹೇಳಿಕೊಡು ನನಗೊ೦ದು ಹಾಡು
ಗುನುಗಬೇಕಿದೆ ಎನಗೆ ಅವಳ ಪಾಡು
ಹೆಕ್ಕಿ ತೆಗೆಯೆನ್ನ ನಿನ್ನ ಜೊತೆಯಲ್ಲಿ
ನಾನು ಆಗುವೆ ಹಾಡು ಹಕ್ಕಿ
ಮೆತ್ತ ಮೆತ್ತಗೆ ತಿರುಗಿ ನೋಡಿಹೆನು
ಮತ್ತೆ ಮತ್ತೆ ನಿನ್ನನೆ ನಾನು
ಲಜ್ಜೆ ತು೦ಬಿರುವ ನಿನ್ನ ಮುಖವನ್ನು
ಎಲ್ಲಿ೦ದಲೋ ಕ್ಷಣದಲ್ಲೇ
ನಿನ್ನ ಆವರಿಸಿರುವ ವ್ವೆಯ್ಯಾರವನ್ನು
ಸ್ವರಗಳೇ ಸ೦ಗಾತಿಯಾದಾಗ
ಸ೦ಚಾರಿ ಭಾವ ತಡೆಯುವವರಾರು
ಮನಸು ಅಲೆ ಅಲೆಯಗಿ ತೇಲುವಾಗ
ಹಿಡಿದು ನಿಲ್ಲಿಸುವವರಾರು
Cool lines buddy.. in this i liked 3rd stanza.. :)
ReplyDeletegood one..:)
ReplyDeletethank you
DeleteThis comment has been removed by the author.
ReplyDeletenice..keep it up..
ReplyDeletethank you
Deletevery nice.. keep penning..
ReplyDeletethank you
Delete