Pages

Monday, May 21, 2012

ಹಗುರಾಗಬೇಕಿದೆ


ಕರಗು ಮೋಡವೆ ಒಮ್ಮೆ
ತಿಳಿ ನೀರ ನೋಡಬೇಕಿದೆ
ಹಸಿರು ಸೀರೆ
ಭುವಿಯನಲ೦ಕರಿಸಬೇಕಿದೆ

ಕರಗು ಮೋಡವೆ ಒಮ್ಮೆ
ಇಳಿದು ಬಾ ಕಣ್ಣಲ್ಲಿ
ಧಾರಾಕಾರವಾಗಿ, ಎಲ್ಲವನ್ನೂ
ತೊಳೆದು ಮರೆಯಬೇಕಿದೆ

ಕರಗು ಮೋಡವೆ ಒಮ್ಮೆ
ನನ್ನ ಹ್ರುದಯದಲ್ಲಿ,
ಒರೆಸಬೇಕಿದೆ ಅಲ್ಲಲ್ಲಿ
ಉಳಿದ ಗುರುತುಗಳ

ಕರಗು ಮೋಡವೆ ಒಮ್ಮೆ
ನಾನು ಕರಗುವ ಮುನ್ನ
ಸೊರಗಿ, ಸರಿಯುವ ಮುನ್ನ
ಹಗುರಾಗಬೇಕಿದೆ

6 comments:

  1. ಚೆಂದ ಬರಿತ್ತೆ ಮಾರಾಯ.. ಖುಷಿ ಆತು ಅಕ್ಷಯಣ್ಣ ಅಲ್ಲದೆ ಇನ್ನೊಬ್ರು ಈ ಥರ ಬ್ಲಾಗ್ ಮೈನ್ಟೈನ್ ಮಾಡ್ತಾ ಇಪ್ಪದು ನೋಡಿ!!! ಹೀಗೇ ಬರೀತಾ ಇರು...; ಎಂಗ ಓದ್ತಾ ಇರ್ತಿಯೋ...!! "ಹ್ರುದಯ" "ಹೃದಯ" ಆಯೆಕ್ಕಾತು ಅಲ್ಲದಾ???

    ReplyDelete
  2. Thanks shailsha... enage kannada typing astagi battille... hangagi akshara tappuga swalpa jaastiye iddu:) odutta iru,,, anu baritta erthe he he he:)

    ReplyDelete
  3. ಸಾರಿ.. ಹವ್ಯಕ ಕನ್ನಡಲಿ ಏನಾದ್ರು ಗ್ರಾಮರ್ ಮಿಸ್ಟೇಕ್ ಇದ್ರೆ..:) ಮಾತಾಡದೆ ಜಮಾನ ಆತು..

    ReplyDelete

LinkWithin