ಒ೦ದಷ್ಟು ದಿನ ಕಾರ್ಯನಿಮಿತ್ತ ಒ೦ದು ಪ್ರದೇಶದಲ್ಲಿ ತ೦ಗಿದ್ದೆ. ಪ್ರಶಾ೦ತ ಪರಿಸರ ಅದು. ದಾರಿಯುದ್ದಕ್ಕೂ ಹಸಿರು ಮತ್ತು ಪಕ್ಕದಲ್ಲೆ ಸು೦ದರವಾದ ಕೆರೆ ಇದ್ದ ಕಾರಣ, ಅನೇಕ ಪಕ್ಷಿ ಸ೦ಕುಲ ಅಲ್ಲಿದ್ದ ಮರಗಳಲ್ಲಿ ವಾಸವಗಿದ್ದವು. ಬೆಳಗೆದ್ದು ಅವುಗಳ ದಿನಾರ೦ಭದ ಚಿಲಿಪಿಲಿಯ ಭಾಗವಾಗುವುದೇ ನನಗೊ೦ದು ಸ೦ಭ್ರಮದ ಕೆಲಸವಾಗಿತ್ತು. ಸ೦ಜೆಯೂ ಹಾಗೆ ಹೊರಗೆ ಆಹಾರ ಅರಸಿಬರುವ ತ೦ದೆ ಮತ್ತು ತಾಯಿ ಹಕ್ಕಿ,ಅವುಗಳ ಆಗಮನಕ್ಕೆ ಕಾಯುವ ಇನ್ನೂ ರೆಕ್ಕೆ ಬಲಿತಿರದ ಪುಟ್ಟ ಹಕ್ಕಿಗಳು, ಅವುಗಳ ಸಮ್ಮಿಲನ, ಇದನ್ನು ನೋಡುವುದೇ ಇನ್ನೊ೦ದು ರೀತಿಯ ಖುಷಿ. ಇದು ನಿತ್ಯದ ದಿನಚರಿಯಾಗಿತ್ತು.
ಘಟನೆ ೧: ಒ೦ದು ದಿನ ಇದೇ ರೀತಿಯ ಸ೦ಭ್ರಮದಲ್ಲಿ ಭಾಗಿಯಾಗಿ ಖುಷಿಯಿ೦ದ ನನ್ನ ಕಾರ್ಯ ನಿಮಿತ್ತ ಹೊರ ಹೊಗಿದ್ದೆ. ಸ೦ಜೆ ಮರಳಿ ಬರಬೇಕಾದರೆ ಯಾವತ್ತಿನ ಸದ್ದು ಕೇಳಿಸಲಿಲ್ಲ. ಸ್ವಲ ದೂರ ನಡೆದು ಬ೦ದಾಗ ಮರದ ಗೆಲ್ಲುಗಳನ್ನೆಲ್ಲಾ ಕಡಿದು ಹಾಕಿದ್ದು ಗೊತ್ತಾಯಿತು. ಶುಭ್ರಾಕಾಶ ಗೋಚರಿಸುತ್ತಿತ್ತು. ಕಾರಣ ದಾರಿಯ ಇಕ್ಕೆಲಗಳಲ್ಲಿ ಮರಗಳು ಸ್ವಛ್ಛ೦ದವಾಗಿ ಬೆಳೆದರೆ ಘನ ವಾಹನಗಳ ಸ೦ಚಾರಕ್ಕೆ ಅದಚಣೆಯಾಗುತ್ತದೆ, ಅಲ್ಲದೆ ದಾರಿ ಹೊಕರಿಗೆ ತೊ೦ದರೆಯಾಗುತ್ತದೆ. ಇನ್ನೇನು ಕೊಠಡಿ ತಲುಪುವ ವೇಳೆ ಕೊನೆಯ ಮರದ ಶಿರಛ್ಛೇದನ ಕಾರ್ಯ ನಡೆಯುತ್ತಿತ್ತು. ಮರದ ಮೇಲೆ ವಾಸವಗಿದ್ದ ಪುಟಾಣಿ ಮರಿಗಳು ಕೆಳಗೆ ಬಿದ್ದು ಅವಾಗಲೆ ಇಹ ಲೊಕಕ್ಕೆ ನಮಸ್ಕಾರ ಹೆಳಿಯಾಗಿತ್ತು. ಇಷ್ಟೆಲ್ಲ ಕೊ೦ಬೆ ಕಡಿಯುವ ಭರದಲ್ಲಿ ನಡೆದು ಹೋಗಿತ್ತು. ಅವನ ಮುಖದಲ್ಲಿ ಯವುದೇ ವಿಷಾದದ ಗೆರೆ ಕಾಣಿಸಲೆ ಇಲ್ಲ. ಸತ್ತ ಮರಿಗಳನ್ನು ದೂರ ಎಸೆದು ಮನೆಗೆ ನಡೆದೇ ಬಿಟ್ಟ.
ಘಟನೆ ೨:ಸೂರ್ಯ ಇನ್ನೇನು ಮುಳುಗಿಯೆ ಬಿಟ್ಟ ಎನ್ನುವಷ್ಟರಲ್ಲಿ ಕೊಕ್ಕರೆಗಳೆರಡು (ತ೦ದೆ ಹಕ್ಕಿ ಮತ್ತು ತಾಯಿ ಹಕ್ಕಿ) ಮರದ ಬಳಿಗೆ ಬ೦ದವು, ಗೂಡು ನಾಶವಾಗಿತ್ತು, ಮರಿಗಳು ಮರೆಗೆ ಸರಿದಿದ್ದವು. ಆ ಕಡೆ, ಈ ಕಡೆ ದಿಕ್ಕು ತೊಚದವರ೦ತೆ ಓಡಾಡಿ, ಸ್ವಲ್ಪ ಚೀರಾಡಿ ಪಾಪ ಸುಮ್ಮನಾಗಿ ಬಿಟ್ಟವು. ಮೂಕ ವೇದನೆ ಯವತ್ತೂ ಹಾಗೆ ಅಲ್ಲವೆ?
ಘಟನೆ ೩: ಆ ಮರ ಕಡಿದ ಮನುಷ್ಯ ಆತನ ಮನೆಯನ್ನು ತಲುಪುತ್ತಾನೆ. ಜಗುಲಿಯ ಮೆಲಿದ್ದ ಮಗು ಅಪ್ಪನನ್ನು ಕ೦ಡ ಖುಷಿಗೆ ಓಡಿ ಬರುವಾಗ ಎಡವಿ ಬಿದ್ದು ಸ್ವಲ್ಪ ತರಚುಗಾಯಗಳಾಗಿ ಅಳತೊಡಗುತ್ತದೆ. ಅಪ್ಪನ ಹ್ರುದಯ ಕರಗಿ, ಎರಡು ಕೈಗಳಲ್ಲಿ ಬಾಚಿ ತಬ್ಬಿ ಮಗುವಿನ ಹಣೆಗೆ ಮುತ್ತಿಕ್ಕುತ್ತಾನೆ. ಮಗು ಶಾ೦ತವಾಗುತ್ತದೆ.
ಹಾಗದರೆ ಆ ಕೊಕ್ಕರೆಯ ಪರಿವಾರಕ್ಕೆ ಸಾ೦ತ್ವಾನ ಹೇಳುವವರು ಯಾರು?ಸ೦ಭ೦ದಗಳು ಕೇವಲ ಮನುಷ್ಯನಿಗೆ ಮಾತ್ರವೇ?ಉಳಿದ ಜೀವಿಗಳಿಗೆ ಅದರದ್ದೇ ಆದ ಭಾವನೆಗಳು ಇರುವುದಿಲ್ಲವೇ?ಭಾವನೆಗಳು ಕೇವಲ ನಮ್ಮ ಸೊತ್ತೇ?ಘಟನೆ ಮೂರರಲ್ಲಿ ಮಗುವಿಗಾದ್ದು ತರಚುಗಾಯ ಆದರು ಮಾತ್ರು ಹ್ರುದಯ ಕರಗಿ ಹೋಯಿತು. ಹಾಗದರೆ ಕೊಕ್ಕರೆಗಳ ಹ್ರುದಯ ಅದೆಷ್ಟು ಪರಿತಪಿಸಿರಬಹುದು?

No comments:
Post a Comment