ಕವಿತೆ ಬರೆಯುವುದೇ ಒಮ್ಮೊಮ್ಮೆ
ಅತಿಯಾದ ಹೆದರಿಕೆ
ಅಗಬಾರದದು ಒಳಗಿನ
ಸಿಟ್ಟು ಹತಾಷೆಗಳ ಕನವರಿಕೆ
ಪದ್ಯ ನೀಡಲಿ ಮುದವ
ಒ೦ದಲ್ಪ ಸುಖವ
ನನ್ನ ಒಳಗಿನ ಬೇಗೆ
ಸುಡದಿರಲಿ ಅವನೆದೆಯ
ದೀಪದಲ್ಲಿನ ಬತ್ತಿ ಎಷ್ಟು ಬೆ೦ದರು ಒಳಗೆ
ಕಾಣದಾರಿಗು ಅದರ ಒಡಲ ಉರಿಯು
ನೀಡೊ ಬೆಳಕಲಿ ಜಗಕೆ ಆಹ್ಲಾದ ತು೦ಬುವುದು
ಅರಿಯಬೇಕಿದೆ ಇ೦ದು ನಿಜದ ಒಲವು
ಅತಿಯಾದ ಹೆದರಿಕೆ
ಅಗಬಾರದದು ಒಳಗಿನ
ಸಿಟ್ಟು ಹತಾಷೆಗಳ ಕನವರಿಕೆ
ಪದ್ಯ ನೀಡಲಿ ಮುದವ
ಒ೦ದಲ್ಪ ಸುಖವ
ನನ್ನ ಒಳಗಿನ ಬೇಗೆ
ಸುಡದಿರಲಿ ಅವನೆದೆಯ
ದೀಪದಲ್ಲಿನ ಬತ್ತಿ ಎಷ್ಟು ಬೆ೦ದರು ಒಳಗೆ
ಕಾಣದಾರಿಗು ಅದರ ಒಡಲ ಉರಿಯು
ನೀಡೊ ಬೆಳಕಲಿ ಜಗಕೆ ಆಹ್ಲಾದ ತು೦ಬುವುದು
ಅರಿಯಬೇಕಿದೆ ಇ೦ದು ನಿಜದ ಒಲವು
No comments:
Post a Comment